ಎಂ.ಎ. ಕನ್ನಡ

ಎಂ.ಎ. ಕನ್ನಡ ಎರಡು ವರ್ಷಗಳ ಸ್ನಾತ್ತಕೋತ್ತರ ಪದವಿಯಾಗಿದ್ದು ಕನ್ನಡ ಸಾಹಿತ್ಯದ ಸಮಗ್ರ ವಿಷಯಗ್ರಹಿಕೆ ಹಾಗೂ ವಿಶ್ಲೇಷಣೆಯ ಉದ್ದೇಶವನ್ನು ಹೊಂದಿದೆ. ಸಾಹಿತ್ಯ ಪರಂಪರೆಯ ಅಧ್ಯಯನ ಹಾಗೂ ಪ್ರಸ್ತುತ ವಿಚಾರಗಳ ತಾರ್ಕಿಕ ವಿಶ್ಲೇಷಣೆಯನ್ನು ರೂಪಿಸುವಲ್ಲಿ ಈ ಪದವಿ ಸಹಕರಿಸುತ್ತದೆ. ಸಾಹಿತ್ಯದ ಪ್ರಕಾರಗಳು, ವಿಶ್ವವ್ಯಾಪಿ ಸಾಹಿತ್ಯಾತ್ಮಕ ಚಿಂತನೆಗಳು ಹಾಗೂ ಸಾಹಿತ್ಯ ಬೋಧನೆಯ ವಿಧಾನಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ. ಮಾಹಿತಿ ತಂತ್ರಾಜ್ಞಾನದ ಇಂದಿನ ಯುಗದಲ್ಲಿ ಸಾಹಿತ್ಯ ಓದಿನ ಹೊಸ ಸಾಧ್ಯತೆಗಳನ್ನು ಸಂಶೋಧನಾ ನೆಲೆಯಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ.

ವಿಷಯದ ಉದ್ದೇಶಗಳು:

  • ಸಾಹಿತ್ಯದ ವಿಸ್ತೃತ ಓದಿನೊಂದಿಗೆ ಕನ್ನಡ ಸಾಹಿತ್ಯ ಪರಂಪರೆಯ ಸೂಕ್ಷ್ಮಗಳನ್ನು ಗ್ರಹಿಸುವುದು ಹಾಗೂ ಹೊಸ ಚಿಂತನೆಗಳಿಗೆ ಮುಖಾಮುಖಿಯಾಗುವುದು.
  • ಹೊಸ ಸವಾಲುಗಳನ್ನು ಎದುರಿಸುತ್ತಾ ಯು.ಜಿ.ಸಿ. ಹಂತದ ಸಾಹಿತ್ಯ ಬೋಧನೆಗೆ ಸಿದ್ದಪಡಿಸುವುದು.
  • ಸಾಹಿತ್ಯ ಅಧ್ಯಯನ ಹಾಗೂ ಸಂಶೋಧನಾತ್ಮಕ ಚಿಂತನೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಅಗತ್ಯತೆಯನ್ನು ಪರಿಚಯಿಸಿ, ಬಳಕೆಯ ಅವಕಾಶಗಳನ್ನು ಕಲ್ಪಿಸುವುದು.
  • ಸಾಹಿತ್ಯದ ವಿವಿಧ ಹಂತಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವುದು.
  • ಸಮಕಾಲೀನ ಸ್ಪರ್ಧೆಗಳಿಗೆ ಸೂಕ್ತ ಮಾದರಿಯಲ್ಲಿ ಸಾಹಿತ್ಯ ಅಧ್ಯಯನವನ್ನು ರೂಪಿಸುವುದು.

ಉತ್ತಮ ಅಭ್ಯಾಸಗಳು:

  • ಕಾವ್ಯ ಮಂಟಪ
  • ಸೃಜನ ಬರಹಗಳ ಸಂಗ್ರಹ
  • ಕ್ಷೇತ್ರ ಕಾರ್ಯ
  • ನಾಟಕಾಭ್ಯಾಸ
Download the ( Kristu Jayanti + ) App for easy access and to keep yourselves updated with the latest news & activities on the campus. Download from Google Play store (android devices) and app store (Apple devices).|