ಅದ್ವಿತೀಯ ೨೦೨೪ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ
Date: 18 January 2024
ದಿನಾಂಕ ೧೮ ಜನವರಿ ೨೦೨೪ರಂದು ನಮ್ಮ ಕಾಲೇಜಿನಲ್ಲಿ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಈ ಸ್ಪರ್ಧೆಗಳಿಗೆ ಬೆಂಗಳೂರಿನ ೧೪ ಕಾಲೇಜುಗಳಿಂದ ಸುಮಾರು ೮೫ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಆಶುಭಾಷಣ, ಕಿರುನಾಟಕ, ಏಕಪಾತ್ರಾಭಿನಯ, ಸಮೂಹ ನೃತ್ಯ, ಏಕವ್ಯಕ್ತಿ ನೃತ್ಯ, ಸಮೂಹ ಗಾಯನ, ಏಕವ್ಯಕ್ತಿ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಕಾಲೇಜಿನ ಅಧ್ಯಾಪಕರು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಸ್ಪರ್ಧೆಗಳ ತೀರ್ಪುಗಾರರನ್ನಾಗಿ ಆಯ್ಕೆ ಮಾಡಿ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ.ಸರ್ವೇಶ್ ಅವರು, ಮಾನವೀಯ ನಿಕಾಯದ ಡೀನ್ ಆದ ಡಾ.ಗೋಪಕುಮಾರ್ ಎ.ವಿ. ಅವರು, ಕಾರ್ಯಕ್ರಮ ಸಂಯೋಜಕರಾದ ಡಾ.ಸೈಯದ್ ಮುಯಿನ್, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಭುವನ್ ವಿ ಮತ್ತು ಮಾನಸ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸ್ಪರ್ಧೆಗಳ ನಿಯಮಾನುಸಾರ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮೌಂಟ್ ಕಾರ್ಮೆಲ್ ಕಾಲೇಜಿನ ಹೆಚ್ಚಿನ ಸ್ಪರ್ಧೆಗಳಲ್ಲಿ ಜಯಶಾಲಿಯಾಗುವುದರ ಮೂಲಕ ವಿನ್ನರ್ ಅಪ್ ಪದಕವನ್ನು ಗಳಿಸಿಕೊಂಡಿತು, ಸಂತ. ಜೋಸೆಫ್ ವಾಣಿಜ್ಯ ಕಾಲೇಜು ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಡಾ.ರವಿಶಂಕರ್, ಡಾ.ಬೈರಪ್ಪ ಮತ್ತು ಡಾ.ಪ್ರೇಮಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.