Kannada Club

ಕೋಟಿ ಕಂಠ ಗಾಯನ (ಕೋಟಿ ಕೊರಳ ಹಾಡು) "ನನ್ನ ನಾಡು – ನನ್ನ ಹಾಡು"
Date: 28/10/2022

ಕನ್ನಡ ಸಾಹಿತ್ಯ ವೇದಿಕೆಯ ವತಿಯಿಂದ ದಿನಾಂಕ 28/10/2022 ಬೆಳಗ್ಗೆ 11 ಗಂಟೆಗೆ ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ರಚಿತವಾಗಿರುವ ಸಾಹಿತಿಗಳ ಸಾಹಿತ್ಯವನ್ನು ಹಾಡುವ ಮೂಲಕ ನಾಡಿನ ಪ್ರತಿ ಅಭಿಮಾಣ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಭಾಗದ ಮುಖ್ಯಸ್ಥರು ಕರ್ನಾಟಕ, ಕನ್ನಡ ಭಾಷೆಯ ಕುರಿತಾಗಿ ರಚಿಸಿರುವ ಕನ್ನಡ ಸಾಹಿತಿಗಳ ಪ್ರಮುಖ ಸಾಹಿತ್ಯದ ಪರಿಚಯ ನೀಡಿದರು. ಪ್ರಥಮ ವರ್ಷದ ಬಿ,ಕಾಂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಭಾಗವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಎಲ್ಲಾ ಅಧ್ಯಾಪಕರು ಅವರು ಉಪಸ್ಥಿತರಿದ್ದರು. ಸಾಹಿತ್ಯ ವೇದಿಕೆಯ ಸಂಯೋಜಕರಾದ ಡಾ.ಸೈಯದ್ ಮುಯಿನ್ ಅವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಹಾಗೂ ಕನ್ನಡ ವಿಭಾಗದ ಪ್ರೊ.ಚಂದ್ರಶೇಖರ್ ಎನ್, ಡಾ.ರವಿಶಂಕರ್ ಎ.ಕೆ. ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

“ಕೋಟಿ ಕಂಠ ಗೀತಗಾಯನ” ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಜ್ಞೆಯ ಮೇರೆಗೆ ನಮ್ಮ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದ್ದು, ಈ ವಿಶೇಷ ಕಾರ್ಯಕ್ರಮದ ವಿವರಗಳು ಕೆಳಕಂಡಂತಿದೆ.

“ ನನ್ನ ನಾಡು – ನನ್ನ ಹಾಡು ‘ ಸಮೂಹ ಗೀತಗಾಯನ – ಅಕ್ಟೋಬರ್ 28 ರಂದು ಶುಕ್ರವಾರ ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವ

  • 1.ನಾಡಗೀತೆಯಾದ ‘ಜಯ ಭಾರತ ಜನನೀಯ ತನುಜಾತೆ’
  • 2.’ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು
  • 3. ‘ಬಾರಿಸು ಕನ್ನಡ ಡಿಂಡಿಮವ’
  • 4. ‘ಹಚ್ಚೇವು ಕನ್ನಡದ ದೀಪ’
  • 5. ‘ವಿಶ್ವ ವಿನೂತನ ವಿದ್ಯಾಚೇತನ’
  • 6. ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’

ಈ ಗೀತೆಗಳನ್ನು ಬೆಳಗ್ಗೆ:11.00 ಗಂಟೆಗೆ ಏಕಕಾಲದಲ್ಲಿ ಹಾಡುವುದಾಗಿ ಆದೇಶವಾಗಿತ್ತು, ಈ ಆದೇಶದಂತೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತ್ಯ ನೋಟ
Date: 13/09/2022

ಕನ್ನಡ ಸಾಹಿತ್ಯ ವೇದಿಕೆಯ ವತಿಯಿಂದ ದಿನಾಂಕ 13/09/2022 ಬೆಳಗ್ಗೆ 11 ಗಂಟೆಗೆ ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಸಾಹಿತಿಗಳ ಸಾಹಿತ್ಯವನ್ನು ಸಮೀಕ್ಷೆ ನಡೆಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರೊ.ಚಂದ್ರಶೇಖರ್ ಎನ್, ಡಾ.ಸೈಯದ್ ಮುಯಿನ್ ಹಾಗೂ ಡಾ.ಬೈರಪ್ಪ ಅವರು ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಸೂಕ್ಷ್ಮ ಪರಿಚಯ ನೀಡಿ, ಗ್ರಂಥಾಲಯದಲ್ಲಿ ಪುಸ್ತಕ ಜೋಡಣಾ ಕ್ರಮವನ್ನು ತಿಳಿಸಿಕೊಟ್ಟರು. ದ್ವಿತೀಯ ವರ್ಷದ ಬಿ,ಎ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಭಾಗವಹಿಸಿದರು. ಕಾಲೇಜಿನ ಗ್ರಂಥಾಲಯದಲ್ಲಿ ಇರುವ ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತರ ಸಾಹಿತ್ಯವನ್ನು ವಿದ್ಯಾರ್ಥಿಗಳು ಇತರೆ ಪುಸ್ತಕಗಳಿಂದ ತೆಗೆದು ಪ್ರತ್ಯೇಕ ಕಪಾಟಿನಲ್ಲಿ ಜೋಡಿಸಿದರು, ಕುವೆಂಪು, ದ.ರಾಬೇಂದ್ರೆ, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಪು.ತಿ.ನ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರು ರಚಿಸಿರುವ ಸಾಹಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿ, ಪುಸ್ತಕಗಳನ್ನು ಕಪಾಟಿನಲ್ಲಿ ಜೋಡಿಸಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತ್ಯದ ಅವಲೋಕನವನ್ನು ವಿದ್ಯಾರ್ಥಿಗಳು ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸರ್ವೇಶ್ ಬಿ.ಎಸ್. ಅವರು ಉಪಸ್ಥಿತರಿದ್ದರು. ಸಾಹಿತ್ಯ ವೇದಿಕೆಯ ಸಂಯೋಜಕರಾದ ಡಾ.ಸೈಯದ್ ಮುಯಿನ್ ಅವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಹಾಗೂ ಕನ್ನಡ ವಿಭಾಗದ ಪ್ರೊ.ಚಂದ್ರಶೇಖರ್ ಎನ್ ಮತ್ತು ಡಾ.ರವಿಶಂಕರ್ ಎ.ಕೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಮ್ಮ ಮೆಚ್ಚಿನ ತೇಜಸ್ವಿ ಪೂರ್ಣಚಂದ್ರ ತೇಜಸ್ವಿ ಜನ್ಮದಿನದ ಪ್ರಯುಕ್ತ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ
Date: 08/09/2022

ಕನ್ನಡ ಸಾಹಿತ್ಯ ವೇದಿಕೆಯ ವತಿಯಿಂದ ದಿನಾಂಕ 08/09/2022 ಬೆಳಗ್ಗೆ 09 ಗಂಟೆಗೆ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನವನ್ನು ತೇಜಸ್ವಿ ಅವರ ಸಾಹಿತ್ಯದ ಸಂವಾದವನ್ನು ಏರ್ಪಡಿಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಂತಿಮ ವರ್ಷದ ಬಿ,ಕಾಂ ವಿದ್ಯಾರ್ಥಿಯಾದ ಪಾವನ ಭಟ್ ಅವರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಅಂತಿಮ ವರ್ಷದ ಬಿ,ಕಾಂ ವಿದ್ಯಾರ್ಥಿಯಾದ ಕು.ಶಶಾಂಕ್ ಅವರು ಅಧ್ಯಾಪಕರುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಬಿ.ಕಾಂ. ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಕಾರ್ತಿಕ್ ದೇಶಪಾಂಡೆ ಅವರು ತೇಜಸ್ವಿ ಸಾಹಿತ್ಯದ ಕಿರುಪಡಿಚಯ ನೀಡಿ, ಕಿರುಗೂರಿನ ಗಯ್ಯಾಳಿಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಕುಮಾರಿ.ವರ್ಷಿಣಿ ಅವರು ತೇಜಸ್ವಿ ಸಾಹಿತ್ಯದಲ್ಲಿ ವ್ಯಕ್ತಗೊಂಡಿರುವ ಪರಿಸರದ ಬಗ್ಗೆ ಮಾಹಿತಿಯನ್ನು ಪ್ರಸ್ತುತಪಡಿಸಿದರು. ಬಿ.ಕಾಂ. ದ್ವಿತೀಯ ವರ್ಷದ ವಿದ್ಯಾರ್ಥಿನಿಗಳಾದ ಚೈತ್ರಗೌಡ ಮತ್ತು ವಿಜಯ ಲಕ್ಷ್ಮೀ ಅವರು ತೇಜಸ್ವಿ ಅವರ ಕತೆ ಕಾದಂಬರಿಗಳ ಕುರಿತು ಸ್ಥೂಲವಾದ ವಿವರ ನೀಡಿದರು. ಕನ್ನಡ ವಿಭಾಗದ ಅಧ್ಯಾಪಕರಾದ ಡಾ.ಬೈರಪ್ಪ ಅವರು ತೇಜಸ್ವಿ ಅವರ ಸಾಹಿತ್ಯದ ಪ್ರಾಮುಖ್ಯತೆ ಕುರಿತು ವಿಶ್ಲೇಷಿಸಿದರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸರ್ವೇಶ್ ಬಿ.ಎಸ್. ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತ ತೇಜಸ್ವಿ ಸಾಹಿತ್ಯದ ಪ್ರಸ್ತುತತೆ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.ಕನ್ನಡ ಸಾಹಿತ್ಯ ವೇದಿಕೆಯ ಸಂಯೋಜಕರಾದ ಡಾ.ಸೈಯದ್ ಮುಯಿನ್, ಹಾಗೂ ಕನ್ನಡ ವಿಭಾಗದ ಪ್ರೊ.ಚಂದ್ರಶೇಖರ್ ಎನ್ ಮತ್ತು ಡಾ.ರವಿಶಂಕರ್ ಎ.ಕೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ವೇದಿಕೆಯ ಸಂಚಾಲಕರಾದ ಮೌಲ್ಯಗೌಡ ಮತ್ತು ಸಚಿನ್ ಅವರು ವಿದ್ಯಾರ್ಥಿ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.


ವಿಶ್ವ ಜಾನಪದ ದಿನ 2022 - ಜಾನಪದ ಬೇರು-ಬೆವರು
Date: 22/08/2022

ದಿನಾಂಕ ೨೨ ಆಗಸ್ಟ್ ೨೦೨೨ರಂದು ಮಧ್ಯಾಹ್ನ ೧-೪೦ಕ್ಕೆ ವಿಶ್ವ ಜಾನಪದ ದಿನವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಇಂದು ವಿಶ್ವ ಜಾನಪದ ದಿನ, ಆಗಸ್ಟ್ ೨೨ರನ್ನು ಬ್ರೆಜಿಲ್ ದೇಶವು ಜಾನಪದ ದಿನವೆಂದು ಆಚರಿಸುತ್ತದೆ, ತನ್ನ ದೇಶದ ಸಮೃದ್ಧ ಜಾನಪದ ಸಂಸ್ಕೃತಿಯನ್ನು, ನೃತ್ಯ, ಇತರೆ ಕಲಾಪ್ರಕಾರಗಳನ್ನು ಆಚರಿಸುವ ಸಂರಕ್ಷಿಸುವ ಕಾರ್ಯವನ್ನು ಇದರ ಮೂಲಕ ಮಾಡುತ್ತಿದೆ. ವಿಲಿಯಂ ಜಾನ್ ಥಾಮ್ಸ್ ಪ್ರಕಾರ ಜಾನಪದ ಎಂದರೆ ‘ಜನರ ಪಾರಂಪರಿಕ ಜ್ಞಾನ’ವೆಂಬುದಾಗಿದೆ. ಇತರೆ ದೇಶಗಳು ಸಹ ಇದೇ ದಿನವನ್ನು ಜಾನಪದ ದಿನವೆಂದು ಆಚರಿಸುವುದು ರೂಢಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕಾಲೇಜಿನಲ್ಲೂ ವಿಶ್ವಜಾನಪದ ದಿನವನ್ನು ಆಚರಿಸಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರೊ.ಚಂದ್ರಶೇಖರ್ ಎನ್ ಅವರನ್ನು ಡಾ. ರವಿಶಂಕರ್ ಎ.ಕೆ ಸ್ವಾಗತಿಸಿದರು, ಡಾ. ಬೈರಪ್ಪ ಎಂ ಅವರು ಜಾನಪದ ಆಶಯ ಗೀತೆಯನ್ನು ಹಾಡಿದರು, ಪ್ರೊ. ಚಂದ್ರಶೇಖರ್ ಎನ್. ಅವರು ವಿಶ್ವ ಜಾನಪದ ದಿನದ ಮಹತ್ವದ ಬಗ್ಗೆ ಬಹಳ ಅದ್ಭುತವಾಗಿ ವರ್ಣಿಸಿದರು. ಪ್ರಪಂಚದ ಇತರೆ ರಾಷ್ಟçಗಳಲ್ಲಿ ಆಚರಿಸುವ ಜಾನಪದ ದಿನದ ಬಗ್ಗೆ ವಿದ್ಯಾರ್ಥಿಗಳಿಗೆ ಕಿರುಪರಿಚಯ ನೀಡಿದರು. ವಿಶ್ವ ಜಾನಪದ ದಿನ ಆಚರಣೆಯ ಆಶಯ ಮತ್ತು ಉದ್ದೇಶವನ್ನು ತಿಳಿಸುತ್ತಾ, ಜಾನಪದ ಸಾಹಿತ್ಯದ ವಿವಿಧ ಆಯಾಮಗಳನ್ನು ವಿವರಿಸುತ್ತಾ, ಪ್ರಾಚೀನದಿಂದಲೂ ಅರ್ವಾಚೀನ ಕಾಲದವರೆಗೂ ಬೆಳೆದು ಬಂದಿರುವ ಜಾನಪದ ಸಾಹಿತ್ಯದ ವಿವಿಧ ಮಜಲುಗಳನ್ನು ಸೋದಾಹರಣವಾಗಿ ವಿವರಿಸಿದರು. ಅವರ ಬಾಲ್ಯದ ನೆನಪುಗಳಲ್ಲಿನ ಜಾನಪದ ಪದಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ರಂಜಿಸಿದರು. ಮಾನವ ಸಂಸ್ಕೃತಿ ವಿಕಾಸದ ಹಾದಿಯಲ್ಲಿ ಜಾನಪದ ಸಾಹಿತ್ಯದ ವಿಶೇಷ ಕೊಡುಗೆಯನ್ನು ವಿವರಿಸಿದರು. ವಿಭಾಗದ ಮುಖ್ಯಸ್ಥರಾದ ಡಾ.ಸರ್ವೇಶ್ ಬಿ.ಎಸ್ ಅವರು ವಂದನಾರ್ಪಣ ಕಾರ್ಯಕ್ರಮವನ್ನು ನೆರವೇರಿಸಿದರು. ಡಾ.ಸೈಯದ್ ಮುಯಿನ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಪ್ರದರ್ಶನ ಕಲಾ ವಿಭಾಗದ ಸಂಯೋಜಕಿಯಾದ ಡಾ.ಪವಿತ್ರ ಅವರು ಜಾನಪದ ಗೀತೆಯನ್ನು ಹಾಡುವುದರ ಮೂಲಕ ಅರ್ಥಪೂರ್ಣತೆಯನ್ನು ತಂದುಕೊಟ್ಟರು. ಜಾನಪದ ದಿನವನ್ನು ಕನ್ನಡ ಸಾಹಿತ್ಯ ವೇದಿಕೆಯ ವತಿಯಿಂದ ಆಚರಿಸಲಾಯಿತು.