Field Visit to ಕುಪ್ಪಳಿ
Date: 26/08/2022
ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಅಸ್ಮಿತೆಯಾದ ಕುಪ್ಪಳಿ ಎಂಬ ಕುವೆಂಪು ಜನ್ಮಭೂಮಿಯ ಪ್ರವಾಸಿ ಸ್ಥಳಕ್ಕೆ ಕ್ರಿಸ್ತು ಜಯಂತಿ ಕಾಲೇಜಿನಿಂದ ಪ್ರತಿವರ್ಷವೂ ಪ್ರವಾಸ ಕೈಗೊಳ್ಳುತ್ತೇವೆ. ಅದೇ ಮಾದರಿಯಲ್ಲಿ ಈ ವರ್ಷವೂ ೨೬ನೇ ಆಗಸ್ಟ್ ೨೦೨೩ರಂದು ೭೭ ವಿದ್ಯಾರ್ಥಿಗಳ ಕನ್ನಡ ಆಸಕ್ತ ವಿದ್ಯಾರ್ಥಿಗಳೊಂದಿಗೆ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವಿದ್ಯಾರ್ಥಿಗೂ ಸಾಹಿತ್ಯದ ಮೌಲ್ಯ ಹಾಗೂ ಅದರ ಕುರಿತ ಗ್ರಹಿಕೆಗಳೊಂದಿಗೆ ಪೂರ್ವಜ್ಞಾನವನ್ನು ತುಂಬಿ ಪ್ರವಾಸ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಮುಂಜಾನೆ ಕುಪ್ಪಳಿಯನ್ನು ತಲುಪಿ, ಬೆಳಗ್ಗೆ ೦೯ರೊಳಗೆ ಮುಂಜಾನೆ ಕಾರ್ಯ, ತಿಂಡಿ ಮುಗಿಸಿ, ಕವಿಶೈಲ ಪ್ರವೇಶಮಾಡಿದರು. ಕವಿಯ ಸಮಾಧಿಯ ಬಳಿ ಕುಳಿತು ಕುವೆಂಪು ಪರಿಚಯ, ಸಾಹಿತ್ಯ ಚಿಂತನೆ ಹಾಗೂ ಕವಿಯ ಆದರ್ಶಗಳನ್ನು ತಿಳಿಯುವ ಜೊತೆಯಲ್ಲಿ ಸಮಾಧಿಯ ರಚನೆ, ಕಲೆ, ವಿಶೇಷತೆಗಳನ್ನು ಅರಿತರು. ನಂತರ ಅಲ್ಲಿನ ಸಾಹಿತ್ಯ ಚಿಂತನೆಗಳು, ಫೋಟೋಗ್ರಪಿಗಳೊಂದಿಗೆ, ತೇಜಸ್ವಿ ಅವರ ಸಮಾಧಿಯ ಬಳಿ ಬಂದರು. ಪೂರ್ಣಚಂದ್ರ ತೇಜಸ್ವಿಯನ್ನು ಪಠ್ಯದ ಮುಖೇನ ಓದಿರುವ ವಿದ್ಯಾರ್ಥಿಗಳು, ಅವರ ಸಮಾಧಿ, ಚಿಂತನೆಗಳನ್ನು ಗ್ರಹಿಸಿದರು. ಕುವೆಂಪು ಮನೆಯ ವಿಶೇಷತೆ, ಅದರ ಇತಿಹಾಸ, ಡಾಕ್ಯುಮೆಂಟರಿ ವೀಕ್ಷಣೆ, ತೇಜಸ್ವಿ ಗ್ಯಾಲರಿಯ ವೀಕ್ಷಣೆಯನ್ನು ಮುಗಿಸಿ, ಊಟದೊಂದಿಗೆ ಆಗುಂಬೆಗೆ ಪ್ರಯಾಣ ಪ್ರಾರಂಭಿಸಿದರು. ಆಗುಂಬೆಯ ಭವ್ಯತೆಯನ್ನು ಕಣ್ಮನಗಳ ಮೂಲಕ ಸವಿದು, ಶೃಂಗೇರಿಗೆ ಬಂದರು. ಶೃಂಗೇರಿಯ ಇತಿಹಾಸ, ಧಾರ್ಮಿಕತೆ, ಸಮನ್ವಯತೆಯನ್ನು ಗ್ರಹಿಸಿ, ದಾಸೋಹ ಸವಿದು ಬೆಂಗಳೂರಿಗೆ ವಾಪಸ್ಸಾದರು. ಸಾಹಿತ್ಯವು ನೀಡುವ ಅದಮ್ಯ ಚೈತನ್ಯವನ್ನು ಈ ಪ್ರವಾಸವು ಮುಕ್ತವಾಗಿ ಎಲ್ಲರಿಗೂ ನೀಡಿತು.
Field Visit to ಕುಪ್ಪಳಿ, ಆಗುಂಬೆ & ಶೃಂಗೇರಿ
Date: 28/10/2022
ಪ್ರತಿ ವರ್ಷದಂತೆ 2022 ನೇ ಸಾಲಿನ ಈ ವರ್ಷವೂ ಕನ್ನಡ ವಿಭಾಗವು ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಸಾಹಿತ್ಯವನ್ನು ಪ್ರತಿನಿಧಿಸುವ ಸ್ಥಳಗಳಿಗೆ ಭೇಟಿ ನೀಡುವುದು ಮುಖ್ಯ ಉದ್ಧೇಶ. ಈ ಉದ್ಧೇಶದೊಂದಿಗೆ ಕನ್ನಡದ ಮೊದಲ ಜ್ಞಾನಪೀಠ ಪುರಸ್ಕೃತರಾದ ಕುವೆಂಪು ಅವರ ಜನ್ಮಸ್ಥಳವು ಸಾಹಿತ್ಯ ಪ್ರವಾಸದ ತಾಣವಾಗಿರುವ ಕಾರಣ ಈ ಪ್ರದೇಶಕ್ಕೆ ಪ್ರವಾಸ ಆಯೋಜಿಸಲಾಯಿತು. ಇದೇ ಸ್ಥಳಕ್ಕೆ ಹತ್ತಿರವಿರುವ ಪ್ರಕೃತಿಯ ರಸತಾಣ ಆಗುಂಬೆ ಹಾಗು ಧಾರ್ಮಿಕವಾಗಿ ಕನ್ನಡ ಸಂಸ್ಕೃತಿಯನ್ನು ಪ್ರತಿನಿಧಿಸುವ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಮಠವನ್ನು ದರ್ಶನ ಮಾಡಿಬರುವ ಯೋಜನೆ ಸಿದ್ಧಪಡಿಸಲಾಯಿತು.
ಈ ಯೋಜನೆಯಂತೆ ದಿನಾಂಕ 28-10-2022 ರ ರಾತ್ರಿ 8 ಗಂಟೆಗೆ ಕಾಲೇಜಿನಿಂದ ಹೊರಟು ಕುಪ್ಪಳಿ ತಲುಪಿದೆವು. ಪೂರ್ಣಚಂದ್ರ ತೇಜಸ್ವಿ ಸ್ಮಾರಕ, ಕುವೆಂಪು ಸ್ಮಾರಕವಿರುವ ಕವಿಶೈಲ, ಕವಿಮನೆ ಈ ಸ್ಥಳಗಳನ್ನು ಮಕ್ಕಳಿಗೆ ಅಲ್ಲಿನ ವಿಶೇಷತೆಯೊಂದಿಗೆ ವಿವರಿಸಲಾಯಿತು. ಉತ್ತಮವಾದ ತಿಂಡಿ, ಊಟದೊಂದಿಗೆ ಮಕ್ಕಳ ಆರೋಗ್ಯ ಕಡೆ ಎಚ್ಚರವಹಿಸಲಾಗಿತ್ತು. ಕುಪ್ಪಳಿಯಿಂದ ಆಗುಂಬೆಯಲ್ಲಿ ಪ್ರಕೃತಿಯ ರಸಧಾರೆಯ ದರ್ಶನಮಾಡಿ, ಶೃಂಗೇರಿಗೆ ಬಂದು ಎಂಟನೇ ಶತಮಾನದ ದೇವಾಲಯಗಳ ಇತಿಹಾಸವನ್ನು ಮಕ್ಕಳಿಗೆ ತೋರಿಸಿ ಊಟ ಮುಗಿಸಿ ಬೆಂಗಳೂರಿಗೆ ವಾಪಸ್ಸು ದಿನಾಂಕ 30-10-2022 ಮುಂಜಾನೆ 6 ಗಂಟೆಗೆ ಆಗಮಿಸಿದೆವು.
Field Visit 2019 [VIEW HERE]
Field Visit 2017 [VIEW HERE]
Field Visit 2016 [VIEW HERE]